Posts

ಅಮ್ಮ ನಮ್ಮಮ್ಮ

Image
ನಾನೊಂಟಿಯಲ್ಲ ಕಣ್ರಿ! ನನಗೊಬ್ಬಳು ಅಮ್ಮನಿದ್ದಾಳೆ ನನ್ನ ಎಲ್ಲಾ ಕರೆಗೂ ಓ..ಗೊಡುತ್ತಾಳೆ.. ಅವಳೆ ರಿ ನನಗೆ ಅವಳಿಗಿಂತ ಮಿಗಿಲು ದೇವರು ಕಿಣ್ಸಿಲ್ಲ ನೋಡ್ರಿ ಒಂಬತ್ತು ತಿಂಗಳು ಹೊತ್ತು ಹೆತ್ತೋಳು ಅವಳೆ ರಿ... ಈಟೀದ್ದವರನ್ನ ಏಟುದ್ದ ಬೆಳಿಸಿಬಿಟ್ಟಾಳೆ?!  ಹನಿಯನ್ನ ಸಾಗರ ಮಾಡೋದು ಸುಮ್ನೆ ಏನ್ರೀ?! ನಿಜಕ್ಕೂ ಅವಳೊಂದು ಅಚ್ಚರಿ ಅಲ್ವೇನ್ರೀ?!  ಅಮ್ಮ..... ಎಂದರೆ ಎಷ್ಟು ಆನಂದ ಕಣ್ರೀ...  ಎದೆಯಾಳದಿಂದ ಬರೊ ಅಕ್ಷರ ಅವೆರಡೇ ಬಿಡ್ರಿ ಏನಿದ್ದರೆ ಏನು ಅಮ್ಮ ಒಬ್ಬಳಿದ್ದರೆ ಸಾಕು ನೋಡ್ರಿ ನನ್ನ ಹಿಂದೆ ಅಮ್ಮ ಇದ್ಧಾಳೆ ಕಣ್ರಿ.... ಆಹಾ... ಅದಕ್ಕೆ ನಾನು ಜಗತ್ತು ಗೆದ್ದು ಬರ್ತೀನಿ ನೋಡ್ರಿ ಯಾರು ಮುನಿಸ್ಕೊಂಡ್ರು ಅಮ್ಮ ಮುನಿಸ್ಕೊಳಲ್ಲಾರಿ ಅವಳು ಕ್ಷಮಯಾ ಧರಿತ್ರಿ ಅಲ್ವೇನ್ರೀ...  ಅಮ್ಮ ಅಂದ್ರೇನೆ ಶಕ್ತಿ ರೀ..ಅತೀ ದೊಡ್ಡ ಶಕ್ತಿ ರೀ... ಆಕಿ ಅಪ್ಪ ಹಿಟ್ಟು ತಂದ್ರೆ ರೊಟ್ಟಿ ಬಡಿದು ತಿನ್ಸ್ತಾಳ  ಅಪ್ಪ ಇಲ್ದಿದ್ರೂ ದುಡಿದು ಮಾಡಿ ಹಾಕ್ತಾಳ ನೋಡ್ರಿ!  ವಿಧವೆ ಆದ್ರೂ ಮಕ್ಳಿಗಾಗಿ ತನ್ನ ಸುಖ ಕಡೆಗಣಿಸಿಬಿಡ್ತಾಳ್ರೀ ನಾವು ಮಾತ್ರ ಮಕ್ಕಳು ಮರಿ ಅಂತ ಅವಳನ್ನ ಕಡೆಗಣಿಸ್ತೀವಿ ಹೌದಲ್ಲೇನ್ರಿ ನಮ್ಮ ಮಕ್ಕಳ ಸಿಂಬಳಕ್ಕೂ ನಮಗವಳೇ ಬೇಕಲ್ರಿ  ನಾನು ಯಾರಿಗೂ ತಲೆ ಬಾಗೋದಿಲ್ಲ ನೋಡ್ರಿ  ಯಾರನ್ನ ತಗೊಂಡು ನಾನೇನು ಮಾಡ್ಲಿ ರಿ ಯಾರು ಬಿಟ್ಟೋದ್ರು ಕಡೆಗೆ ಅಮ್ಮ ಇರ್ತಾಳೆ ಸಾಕ್ರೀ ನಮ್ಮಮ್ಮನ ಮುಂದೆ ಏನು ಹೇಳಬೇಡ್ರಿ ಮತ್ತೆ ಬೈತಾಳೆ ಜಗದಲ್ಲಿ

ಅಮ್ಮ

Image
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ. ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ... ದೇವತೆಯಂತೆ ಭೂಮಿಗೆ ಬಂದಳು ಪ್ರೇಮದ ಸಿರಿಯ ನನಗಾಗಿ ತಂದಳು’ ಈ ಹಾಡನ್ನು ಯಾರು ತಾನೆ ಕೇಳಿರುವುದಿಲ್ಲ ಹೌದು ಇದು ಎಲ್ಲರ ಕಿವಿಲ್ಲೂ ಗೂಂಯ್ ಗುಟ್ಟುತ್ತಿರುತ್ತದೆ. ‘ದೇವರು ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದೆ ತಾಯಿಯನ್ನು ಸೃಷ್ಟಿಸಿದ್ದಾನೆ’ ಎನ್ನುವ ಮಾತಿದೆ. ಹೌದು ಪ್ರಪಂಚದಲ್ಲಿ ತಾಯಿಗೆ ಸರಿಸಾಟಿಯಾಗಬಲ್ಲಂತಹ ಯಾವ ಸಂಬಂಧವೂ ಇರದು. ತಾಯಿಯೆಂದರೆ ಅವಳು ಸೃಷ್ಟಿಯ ಅಧ್ಬುತವೆ ಸರಿ ಎನ್ನಬಹುದು. ಮಕ್ಕಳಿಗಾಗಿ ತನ್ನ ಇಡೀ ಬದುಕನ್ನೇ ಧಾರೆ ಎರೆವ ಅವಳ ತ್ಯಾಗ ತುಂಬಾ ಅಮೂಲ್ಯವಾದದು. ಒಂಬತ್ತು ತಿಂಗಳು ಹೆತ್ತು ಹೊತ್ತು ಮಕ್ಕಳಿಗಾಗಿ ತಾಯಿ ಏನೆಲ್ಲಾ ತ್ಯಾಗ ಮಾಡುತ್ತಾಳೆ. ಅವಳ ತ್ಯಾಗ ಅಮರವಾದದ್ದು. ಮಕ್ಕಳ ಪಾಲನೆ ಪೋಷಣೆಯಿಂದ ಹಿಡಿದು ಮಕ್ಕಳ ಆರೋಗ್ಯ ಶಿಕ್ಷಣ ಸಾಧನೆ ಎಲ್ಲದಕ್ಕೂ ಅವಳು ಬೆಂಬಲವಾಗಿ ಮತ್ತು ಬೆಂಗಾವಲಾಗಿ ನಿಂತಿರುತ್ತಾಳೆ.  ಯಾವ್ಯಾವುದೊ ದಿನವನ್ನು ಆಚರಿಸುವ ನಾವು ನಮಗೆ ಜನ್ಮ ನೀಡಿದ ತಾಯಂದಿರಿಗಾಗಿ ಒಂದು ದಿನವನ್ನು ಮೀಸಲಾಗಿಟ್ಟು  ಆಚರಿಸೋಣ. ತಾಯಂದಿರ ದಿನ ಆಚರಿಸುವುದೆಂದರೆ ಬರೀ ತಾಯಂದಿರಿಗೆ ಈ ದಿನ ಶುಭಾಶಯ ಹೇಳುವುದೊ ಉಡುಗೊರೆ ನೀಡಿ ಬಿಟ್ಟು ಬಿಡುವುದಲ್ಲವೆ ಅಲ್ಲ. ಬದಲಾಗಿ ಅಮ್ಮ ನಮಗಾಗಿ ಮಾಡಿದ ತ್ಯಾಗಗಳಲ್ಲಿ ಪ್ರತಿಯಾಗಿ ನಾವು ಎಷ್ಟು ಮರಳಿ ತೀರಿಸಿದ್ದೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಅವಳು ನಮಗಾಗಿ